ರಾಜ್ಯದಲ್ಲಿ 'ಆಜಾನ್' ವಿರುದ್ಧ ನಿಲ್ಲದ ಸಮರ..! | Azaan | Mike Controversy | Public TV

2022-06-19 113

ಅಜಾನ್ ವಿರುದ್ಧ ಶ್ರೀರಾಮಸೇನೆ ಸಮರ ನಿಲ್ಲಿಸುತ್ತಿಲ್ಲ.. ಆಜಾನ್ ವಿರುದ್ಧ ಪಾರ್ಟ್-3 ಹೋರಾಟಕ್ಕೆ ಸಜ್ಜಾಗಿದೆ. ಆಜಾನ್ ವಿಚಾರಕ್ಕೆ ಸರ್ಕಾರಕ್ಕೆ ಮತ್ತೆ ಹೈಕೋರ್ಟ್ ನಿರ್ದೇಶನ ನೀಡಿದೆ. ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ 6 ಗಂಟೆಯೊಳಗೆ ಧ್ವನಿವರ್ಧಕ ಬಳಕೆಯಾಗದಂತೆನೋಡಿಕೊಳ್ಳುವಂತೆ ಮತ್ತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಈ ಸೂಚನೆಯ ಪಾಲನೆಯ ಬಗ್ಗೆ ಹೈಕೋರ್ಟ್ ನಿರ್ದೇಶನದ ಪ್ರತಿಯನ್ನು ಠಾಣೆ ಠಾಣೆಗೆ ಶ್ರೀರಾಮಸೇನೆ ನೀಡಲಿದೆ. 20 ದಿನದವರೆಗೆ ರಾಜ್ಯದ ಪ್ರತಿ ಠಾಣೆಗೆ ತೆರಳಿ ಕೋರ್ಟ್ ಆದೇಶ ಪಾಲನೆ ಮಾಡುವಂತೆ ಮನವಿ ಮಾಡಲಿದೆ. 20 ದಿನದ ಬಳಿಕವೂ ರೂಲ್ಸ್ ಪಾಲನೆ ಮಾಡದೇ ಇದ್ರೇ ಉಗ್ರ ಹೋರಾಟ ಮಾಡುವುದಾಗಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ.

#publictv #pramodmuthalik #mikecontroversy